Posts

ಕೃಷ್ಣದೇವರಾಯ ಪುಸ್ತಕ ವಿಶ್ಲೇಷಣೆ

Image
ಪುಸ್ತಕ : ಕೃಷ್ಣದೇವರಾಯ ಅಮರ ಚಿತ್ರ ಕಥಾ ಪುಸ್ತಕ ಸರಮಾಲೆ ಪುಟಗಳು : ೩೩ ಸಾಕಷ್ಟು ಪುಸ್ತಕ ಓದಿರೋ ನನಗೆ ಅಮರ ಚಿತ್ರ ಕಥಾ ಮಾಲೆಯ ಪುಸ್ತಕಗಳ ಪರಿಚಯ ಮಾಡಿಸಿಕೊಟ್ಟದ್ದು ನನ್ನ ೧೦ ವರ್ಷದ ಮಗ ಅಂತಾನೆ ಹೇಳಬಹುದು . ನನ್ನ ಮಗನಲ್ಲಿ ಓದೋ ಕೂತೂಹಲ ಮೂಡಿಸಲು ಅವನಿಗೆ ಒಂದಿಷ್ಟು ಕಥೆ ಪುಸ್ತಕಗಳ ಶೋಧನೆ ಮಾಡುತ್ತಿದ್ದಾಗ , ಅಮರ ಚಿತ್ರ ಕಥಾ ಮಾಲೆ ಕಣ್ಣಿಗೆ ಬಿತ್ತು . ಒಂದಿಷ್ಟು ಪುಸ್ತಕ ತರಿಸಿ ಅವನಿಗೆ ಕೊಟ್ಟೆ . ಒಂದೇ ದಿನದಲ್ಲಿ ಅವನು ಎರಡು, ಮೂರು, ನಾಲ್ಕು ಪುಸ್ತಕ ಓದಿ ಮುಗಿಸಿ, ಚೆನ್ನಾಗಿವೆ ಇನ್ನಷ್ಟು ತರಿಸಿ ಅಂದ ! ಅದೇನಪ್ಪ ಅಷ್ಟು ಚೆನ್ನಗಿವೆಯಾ ? ಅಂತ ನನಗೂ ಕೂತುಹಲವಾಯಿತು . ಅದಾದ ಮೇಲೆ ನಾನು ಅಮರ ಚಿತ್ರ ಕಥಾ ಮಾಲೆ ಪುಸ್ತಕಗಳ ಅಭಿಮಾನಿಯಾದೆ ! ಕಥೆ ಶುರುವಾಗೋದು ೧೫೦೯ ರಲ್ಲಿ . ವಿಜಯನಗರದ ರಾಜ ವೀರ ನರಸಿಂಹನ ಆರೋಗ್ಯದಲ್ಲಿ ಸಮಸ್ಯೆಯಾಗಿ, ಅವನು ತನ್ನ ಮಗನನ್ನು ಉತ್ತಾರಾಧಿಕಾರಿಯಾಗಿ ಮಾಡಲು ನಿರ್ಧರಿಸಿ , ತನ್ನ ಸಹೋದರ ಕೃಷ್ಣದೇವರಾಯ ಬದುಕಿರೋವರೆಗೆ ಅದು ಸಾಧ್ಯವಿಲ್ಲ ಎಂದು ಗೊತ್ತಿದ್ದು , ಮಂತ್ರಿ ತಿಮ್ಮರಸು ಗೆ , ಕೃಷ್ಣದೇವರಾಯನ್ನು ಸಾಯಿಸಲು ಆಜ್ಞೆ ಕೊಡುತ್ತಾನೆ . ನಾಳೆಯೊಳಗೆ ಅವನ್ನು ಸಾಯಿಸಿ ಅವನ ಕಣ್ಣನ್ನು ತಂದು ತೋರಿಸಲು ಹೇಳುತ್ತಾನೆ . ತಿಮ್ಮರಸು ಕೃಷ್ಣದೇವರಾಯನನ್ನ ಉಪಾಯವಾಗಿ ರಾಜ್ಯದಿಂದ ಹೊರಗೆ ಕಳಿಸಿ , ಒಂದು ಆಡಿನ ಕಣ್ಣುಗಳನ್ನ ಕತ್ತರಿಸಿ ತಂದು ವೀರ ನರಸಿಂಹನಿಗೆ ಕೃಷ್ಣದೇವರಾಯ ಸತ್ತನೆಂದು ಅವು ಅವನ ಕಣ್ಣುಗಳ